Friday, April 15, 2011

Saturday, February 27, 2010

ನನ್ನ ಜೀವಕ್ಕೊಂದೆರಡು ಮಾತು...

ನನ್ನ್ ಹೆಗಲ್ ಮೇಲೆ

ನಿನ್ನ್ ತಲೆ,
ನಿನ್ನ ಕಣ್ನ್ ಮೇಲೆ
ನನ್ನ ಕನಸು..

ನನ್ನ್ ಜೀವಾ

ಇರೋವರ್ಗೂ ಹೀಗೆ
ಇದ್ಬಿಡೋನವ?

ನಿನ್ನ್ ಉಸಿರಲ್ಲೇ

ನನ್ನ ಉಸಿರು,
ನಿನ್ನ ನೆನಪು
ಸದಾ ಹಸಿರು....

ನನ್ನ್ ಜೀವಾ,

ನಿನ್ನ್ ಹಣೆ ಮೇಲೆ
ನನ್ನ ಮುತ್ತು..
ಒಂದ್ ಸಲ ನಗು, ಪ್ಲೀಸ್,
ನನ್ನ್ ಕಣ್ನ್ ತುಮ್ಬುಸ್ಕೊಂತಿನಿ...

ನನ್ನ್ ಒಂದ್ ಒಂದ್

ಉಸಿರೂ
ನಿನ್ನ ನೆನಪೇ..
ತಣ್ಣನೆ ಗಾಳೀಲೂ
ನಿನ್ನ್ ಕೂದಲ ಸುವಾಸನೆ..

ಪ್ಲೀಸ್, ಒಂದ್ಸಲ ನನ್ನ್

ಹೆಸರ್ ಕೂಗು,
ನಾನಿರೋದ್ ನಂಗೆ
ನೆನಪಾಗುತ್ತೆ..

ನನ್ನ್ ಎದೆ ಮೇಲೆ

ತಲೆಯಿಟ್ಟು ಮಲಗು..
ನನ್ನ ಹೃದಯ ನಿನ್ನ
ಹೃದಯದ ಹತ್ರ ಮಾತಾಡಬೇಕಂತೆ..

ಪ್ಲೀಸ್ ಕಣೆ,

ನನ್ನ್ ಕಣ್ನ್ ನೋಡುವಾಗ
ರೆಪ್ಪೆ ಬಡೀ
ನಾನ್ usiradodann
ಮರತೆeನು!

ಪ್ಲೀಸ್,

ನನ್ನ ಒಂದ್ಸಲ
ಅಪ್ಪ್ಕೋ
ನಂಗೆ ಈ ದೇಹ
ಇರೋದ್ ನೆನಪಾಗುತ್ತೆ..

ಒಬ್ನೇ ಕುಳ್ತಿದೀನಿ

ಕಾಯ್ತಿದೀನಿ,
ಕೈಯಲ್ಲಿ ದೀಪ ಹಿಡ್ಕೊಂಡು
ಬಾ,
ನಿನ್ನ ಕಣ್ಣಲ್ಲಿ ನನ್ನ ನೋಡು,
ಕತ್ಲು ಸಾಯುತ್ತೆ..
ಬೆಳಕು ನಗುತ್ತೆ...

ಬೆಳಕು ತುಂಬು ಬಾ ಜೀವಾ..

ಕಾಯ್ತಿದೀನಿ...